ಅಘ್ಘಾನಿಸ್ತಾನ ವಿರುದ್ದದ ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗೆ ಭಾರತ ತಂಡ ಪ್ರಕಟ: ಟೆಸ್ಟ್ ತಂಡಕ್ಕೆ ಕನ್ನಡಿಗ ಕೆ.ಎಲ್.ರಾಹುಲ್ ಉಪನಾಯಕರಾಗಿ ಆಯ್ಕೆ.

 

ಅಘ್ಘಾನಿಸ್ತಾನ ವಿರುದ್ದ ಏಕೈಕ ಟೆಸ್ಟ್ ಪಂದ್ಯಕ್ಕೆ ಶುಭ್ ಮನ್ ಗಿಲ್ ನಾಯಕನಾಗಿ, ಕೆ.ಎಲ್.ರಾಹುಲ್ ಉಪನಾಯಕರಾಗಿ ಮುನ್ನಡೆಸಿದ್ದರೆ, ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್.ರಾಹುಲ್ ಆರಂಭಿಕರಾಗಿ ಆಡಲಿದ್ದಾರೆ.

ಜೂನ್ 6 ರಿಂದ 10 ರವರೆಗೆ ನ್ಯೂ ಚಂಡೀಗರ್ ನಲ್ಲಿ ಏಕೈಕ ಟೆಸ್ಟ್ ಪಂದ್ಯ ನಡೆಯಲಿದ್ದು, ನಂತರ ಜೂನ್ 14 ರಿಂದ 20 ರವರೆಗೆ ಏಕದಿನ ಪಂದ್ಯಗಳು ನಡೆಯಲಿದೆ.

ಟೆಸ್ಟ್ ತಂಡಕ್ಕೆ ಸಿರಾಜ್, ನಿತೀಶ್ ಕುಮಾರ್ ರೆಡ್ಡಿ ಕಂಬ್ಯಾಕ್ ಮಾಡಿದ್ದಾರೆ. ಕನ್ನಡಿಗರಾದ ದೇವದತ್ ಪಡಿಕ್ಕಲ್ ಮತ್ತು ಪ್ರಸಿದ್ದ ಕೃಷ್ಣ ಸ್ಥಾನ ಪಡೆದಿದ್ದಾರೆ. ಗುರ್ನೂರ್ ಬ್ರಾರ್ ಮತ್ತು ಹರ್ಷ್ ದುಬೆ ಟೆಸ್ಟ್ ತಂಡದಲ್ಲಿ ಮೊದಲ ಅವಕಾಶ ಪಡೆದುಕೊಂಡಿದ್ದಾರೆ.

ಏಕದಿನ ತಂಡದಲ್ಲಿ ಹಲವು ಹೊಸಬರಿಗೆ ಅವಕಾಶ

ಏಕದಿನ ತಂಡದಲ್ಲಿ ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಪ್ರಿನ್ಸ್ ಯಾದವ್ ಆಯ್ಕೆಯಾಗಿದ್ದು, ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ರಿಷಬ್ ಪಂತ್ ಅವರನ್ನು ಕೈಬಿಡಲಾಗಿದ್ದು, ಶ್ರೇಯಸ್ ಅಯ್ಯರ್ ಅವರಿಗೆ ಉಪನಾಯಕನನ್ನಾಗಿ ನೇಮಿಸಲಾಗಿದೆ. ರೋಹಿತ್ ಮತ್ತು ವಿರಾಟ್ ಅವರನ್ನು ಏಕದಿನ ತಂಡದಲ್ಲಿ ಮುಂದುವರಿಸಿದ್ದು, ಜಾಡೇಜಾರನ್ನ ಎರಡು ತಂಡಗಳಿಂದ ಕೈಬಿಡಲಾಗಿದೆ.

ಭಾರತ ಟೆಸ್ಟ್ ತಂಡ

ಶುಭ್ ಮನ್ ಗಿಲ್ (ನಾಯಕ), ಕೆ.ಎಲ್.ರಾಹುಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ರಿಷಬ್ ಪಂತ್, ದೇವದತ್ ಪಡಿಕ್ಕಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ದ್ ಕೃಷ್ಣ, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಧ್ರುವ್ ಜುರೆಲ್, ಹರ್ಷ್ ದುಬೆ.


ಭಾರತ ಏಕದಿನ ತಂಡ

ಶುಭ್ ಮನ್ ಗಿಲ್ (ನಾಯಕ), ಶ್ರೇಯಸ್ ಅಯ್ಯರ್ (ಉಪನಾಯಕ) ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ಪ್ರಸಿದ್ದ್ ಕೃಷ್ಣ, ಗುರ್ನೂರ್ ಬ್ರಾರ್, ಹರ್ಷ್ ದುಬೆ.


ಭಾರತ ಮತ್ತು ಅಘ್ಘಾನಿಸ್ತಾನ: ಟೆಸ್ಟ್ ಪಂದ್ಯ ಜೂನ್ 6 ರಿಂದ 10ರವರೆಗೆ ನ್ಯೂ ಚಂಡೀಗರ್

 

ಭಾರತ ಮತ್ತು ಅಘ್ಘಾನಿಸ್ತಾನ: ಏಕದಿನ ಸರಣಿ ವೇಳಾಪಟ್ಟಿ:

ಜೂನ್ 14: ಮೊದಲ ಏಕದಿನ ಪಂದ್ಯ, ಧರ್ಮಶಾಲಾ

ಜೂನ್ 17: ಎರಡನೇ ಏಕದಿನ ಪಂದ್ಯ, ಲಕ್ನೋ

ಜೂನ್ 20: ಮೂರನೇ ಏಕದಿನ ಪಂದ್ಯ, ಚನ್ನೈ 


Comments