ನಾಲ್ಕೇ ವಾರಕ್ಕೆ ಒಟಿಟಿಗೆ ಲಗ್ಗೆ ಇಟ್ಟಿ ಪವನ್ ಕಲ್ಯಾಣ್ ಅಭಿನಯದ ‘ಓಜಿ’: ಕನ್ನಡದಲ್ಲೂ ಲಭ್ಯ

     ಚಿತ್ರಮಂದಿರಕ್ಕೆ ಚಿತ್ರವೊಂದು ಬಂದು ಒಂದು ತಿಂಗಳಾಗಿಲ್ಲ, ಅಷ್ಟರಲ್ಲೇ ಓಟಿಟಿಗೆ ಬಂದಿರುತ್ತೆ. ಈಗ ಹೊಸಬರ ಚಿತ್ರಕ್ಕಿಂತ ಸ್ಟಾರ್ ಚಿತ್ರಗಳದ್ದು ಇದೇ ಗತಿಯಾಗಿದೆ. ಅನೇಕರು ಈಗ ಟಿಟಿಯಲ್ಲಿ ಚಿತ್ರ ಪ್ರಸಾರವಾಗುವುದನ್ನೇ ಎದುರು ನೋಡುತ್ತಿದ್ದಾರೆ. ಮತ್ತೊಂದು ಕಡೆ ಚಿತ್ರಮಂದಿರಕ್ಕೆ ಜನರು ಬರುತ್ತಿಲ್ಲ ಎಂದು ಚಿತ್ರರಂಗ ಗೊಣಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಂಧ್ರದ ಉಪಮುಖ್ಯಮಂತ್ರಿ ಮತ್ತು ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ‘ಓಜಿ’ ಚಿತ್ರ ಓಟಿಟಿಗೆ ಲಗ್ಗೆ ಹಾಕುತ್ತಿದೆ.

ಈ ವರ್ಷದ ದ್ವಿತೀಯಾರ್ಧದಲ್ಲಿ ಪವನ್ ಕಲ್ಯಾಣ್ ತಮ್ಮ ಅಭಿಮಾನಿಗಳಿಗೆ ಎರಡು ಬಾರಿ ಕಾಣಿಸಿಕೊಂಡಿದ್ದರು. ಆ ಪೈಕಿ “ಹರಿ ಹರ ವೀರಮಲ್ಲು” ಒಂದಾದರೆ, “ಓಜಿ” ಮತ್ತೊಂದು, ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿದ “ಹರಿ ಹರ ವೀರಮಲ್ಲು” ಅಮೆಜಾನ್ ಪ್ರೈಂನಲ್ಲಿ ಇದೆ.

“ಓಜಿ” ಬಾಕ್ಸಾಫೀಸಿನಲ್ಲಿ ಭಾರತದಲ್ಲೇ 191.9 ಕೋಟಿ ಗಳಿಸಿದೆ. ಇನ್ನೂ ವಿಶ್ವದಾದ್ಯಂತ ಗಳಿಕೆ ನೋಡಿದರೆ 300 ಕೋಟಿಗೂ ಅಧಿಕ ಎಂದು “ಸ್ಯಾಕ್ನಿಲ್” ವರದಿ ಮಾಡಿದೆ. ಸೆಪ್ಟೆಂಬರ್ 25ಕ್ಕೆ ತೆರೆಗೆ ಬಂದಿದ್ದ “ಓಜಿ” ಇನ್ನೂ ಚಿತ್ರಮಂದಿರದಲ್ಲಿ ಇದೆ. ಆದರೂ ಕೂಡ ಅಕ್ಟೋಬರ್ 23ಕ್ಕೆ ಓಟಿಟಿ ಬಿಡುಗಡೆ ಮಾಡಲು ಮುಂದಾಗಿರುವುದು ಹಲವು ಪ್ರಶ್ನೆಗಳು ಸದ್ಯ ಕಾಡುತ್ತಿದೆ.

OG Movie Poster     Image Credit : Google

“ಓಜಿ” ಕನ್ನಡದಲ್ಲೂ ಲಭ್ಯ

ಇದು ಪ್ಯಾನ್ ಇಂಡಿಯಾ ಕಾಲ, ಪ್ರತಿಯೊಬ್ಬರ ಚಿತ್ರಗಳು ಕನಿಷ್ಟ 5 ಭಾಷೆಗಳಲ್ಲಿ ಬಿಡುಗಡೆಗೊಳ್ಳುವುದು ಸಾಮಾನ್ಯ. ಓಜಿ ಚಿತ್ರಮಂದಿರಗಳಲ್ಲಿ ಕೇವಲ ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವನ್ನು ಈಗ ತಮಿಳು, ಮಲಯಾಳಂ ಮತ್ತು ಕನ್ನಡಕ್ಕೂ ಡಬ್ ಮಾಡಲಾಗಿದೆ. ಹೀಗಾಗಿ ಕನ್ನಡಿಗರು ಕನ್ನಡದಲ್ಲಿ ನೋಡಬಹುದು.

    ಸಾಹೋ ಚಿತ್ರ ನಿರ್ದೇಶಿಸಿದ್ದ ಸುಜಿತ್ ಈ ಚಿತ್ರದ ನಿರ್ದೇಶಕರು, ಪವನ್ ಕಲ್ಯಾಣ್ ಅವರ ಎದುರು ಇಮ್ರಾನ್ ಹಶ್ಮಿ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಎಸ್.ತಮನ್ ಸಂಗೀತವಿದ್ದು, ಡಿವಿವಿ ದಾನಯ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕನ್ನಡತಿ ಪ್ರಿಯಾಂಕ ಮೋಹನ್ ಚಿತ್ರದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಚಿತ್ರದ ವಿಶೇಷ ಹಾಡಿನಲ್ಲಿ ನೇಹಾ ಶೆಟ್ಟಿ ಹೆಜ್ಜೆ ಹಾಕಿದ್ದಾರೆ. ಚಿತ್ರ ಬಿಡುಗಡೆಯಾದಾಗ ಈ ಹಾಡು ಇರಲಿಲ್ಲ. ಆದರೆ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಹಾಡನ್ನು ಸೇರಿಸಲಾಗಿದೆ.
Image Credit : Movie Crow
NETFLIXನಲ್ಲಿ  ಅಕ್ಟೋಬರ್ 23ಕ್ಕೆ ತೆರೆಗೆ
    ಅಕ್ಟೋಬರ್ 23ಕ್ಕೆ ಓಜಿ ಚಿತ್ರ NETFLIXನಲ್ಲಿ ಪ್ರಸಾರವಾಗಲಿದೆ. ಆಸಕ್ತ ಚಿತ್ರಪ್ರೇಮಿಗಳು ಮತ್ತು ಪವನ್ ಕಲ್ಯಾಣ್ ಅಭಿಮಾನಿಗಳು ಮನೆಯಲ್ಲೇ ನೋಡಬಹುದಾಗಿದೆ. ವಿಶೇಷವೆಂದರೆ ಸೆನ್ಸಾರ್ ಮಂಡಳಿಯಿಂದ ‘ಎ’ ಸರ್ಟಿಫಿಕೇಟ್ ಪಡೆದ ಪವನ್ ಕಲ್ಯಾಣ್ ಅವರ ಮೊದಲ ಚಿತ್ರವಾಗಿದೆ.

Comments