SONY NETWORKನಿಂದ ಕನ್ನಡಿಗರಿಗೆ ಶುಭ ಸುದ್ದಿ: ಈಗ ಸೋನಿ ಸ್ಪೋರ್ಟ್ಸ್ ಕನ್ನಡದಲ್ಲೂ ಲಭ್ಯ.

 ಭಾರತದ ಪ್ರಮುಖ ಕ್ರೀಡಾ ಪ್ರಸಾರ ಸಂಸ್ಥೆಯಾದ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ (Sony Sports Network), ಏಪ್ರಿಲ್ 01 ರಿಂದ ತನ್ನ ವಾಹಿನಿಯಲ್ಲಿ ಕನ್ನಡ ಭಾಷೆಯ ಕಾಮೆಂಟರಿ ಹಾಗೂ ಪ್ರಸಾರವನ್ನು ಅಧಿಕೃತವಾಗಿ ಆರಂಭಿಸಿದೆ. ಕನ್ನಡಿಗರ ಬಹುದಿನಗಳ ಬೇಡಿಕೆಯನ್ನ ಸೋನಿ ಸಂಸ್ಥೆ ಈಡೇರಿಸಿದೆ.

Sony Sportsನಲ್ಲಿ ಏನೇನು ವೀಕ್ಷಿಸಬಹುದು ?

Sony Sports ವಿಶ್ವದ ಅತ್ಯುತ್ತಮ ಕ್ರೀಡಾ ಹಕ್ಕುಗಳನ್ನು ಹೊಂದಿದೆ. ಕನ್ನಡದಲ್ಲಿ ಲಭ್ಯವಿರುವುದರಿಂದ ಕ್ರಿಕೆಟ್, ಪುಟ್ಬಾಲ್ ಡಬ್ಲ್ಯೂಡಬ್ಲ್ಯೂಇ (WWE), ಟೆನ್ನಿಸ್, UFC, ಫೈಟಿಂಗ್ ಹಾಗೂ ಪ್ರಮುಖ ಕ್ರೀಡಾ ಕೂಟಗಳಾದ ಏಷ್ಯನ್ ಗೇಮ್ಸ್ ಪ್ರಸಾರವೂ ಇರಲಿದೆ.

ಇನ್ನೂ ಸ್ಟಾರ್ ಸ್ಪೋರ್ಟ್ಸ್ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಕ್ರಿಕೆಟ್ ಮತ್ತು ಕಬ್ಬಡಿ ಮಾತ್ರ ಪ್ರಸಾರ ಮಾಡುತ್ತಿದ್ದು, ಇನ್ನುಳಿದ ಕ್ರೀಡೆಗಳನ್ನ ಹಿಂದಿ ಮತ್ತು ಇಂಗ್ಲೀಷಿನಲ್ಲಿ ಮಾತ್ರ ಪ್ರಸಾರ ಮಾಡುತ್ತಿದೆ.

ಕನ್ನಡ ಪ್ರಸಾರದಿಂದ ಆಗುವ ಪ್ರಯೋಜನಗಳೇನು ?

ಯಾವುದೇ ಕ್ರೀಡೆಯನ್ನ ಸುಲಭ ಅರ್ಥ ಮಾಡಿಕೊಳ್ಳಬಹುದು, ಮನೆಯ ಹಿರಿಯರು ಮತ್ತು ಮಕ್ಕಳು ಒಟ್ಟಾಗಿ ಕುಳಿತು ಕ್ರೀಡೆಯನ್ನ ನೋಡಬಹುದು. ಕನ್ನಡದ ಮಾಜಿ ಕ್ರೀಡಾಪಟುಗಳಿಗೆ ಮತ್ತು ಕ್ರೀಡಾ ವಿಶ್ಲೇಷಕರಿಗೆ ಹೊಸ ಉದ್ಯೋಗ ಮತ್ತು ವೇದಿಕೆ ಸಿಕ್ಕಂತಾಗುತ್ತದೆ.

ಜನರ ಪ್ರತಿಕ್ರಿಯೆ ಹೇಗಿದೆ ?

Sony Sportsನ ಈ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಾಕ ಬೆಂಬಲ ಸಿಗುತ್ತಿದೆ. “ಕನ್ನಡದಲ್ಲಿ ಕ್ರೀಡಾ ಕಾಮೆಂಟರಿಗಳನ್ನ ಕೇಳುವುದೇ ನಮ್ಮ ಸೌಭಾಗ್ಯ” ಎಂದು ಅನೇಕ ಅಭಿಮಾನಿಗಳು ಹೇಳಿದ್ದಾರೆ. ಮುಖ್ಯವಾಗಿ ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದ ಕ್ರೀಡಾಭಿಮಾನಿಗಳು ಈ ಕ್ರಮವನ್ನ ಬೆಂಬಲಿಸಿದ್ದಾರೆ.

ಒಟ್ಟಾರೆಯಾಗಿ, ಕ್ರೀಡಾ ಪ್ರಸಾರ ಕ್ಷೇತ್ರದಲ್ಲಿ ಪ್ರಾದೇಶಿಕ ಭಾಷೆಗಳಿಗೆ ಸಿಗುತ್ತಿರುವ ಆದ್ಯತೆ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಏಪ್ರಿಲ್ 01 ರಿಂದ ನಿಮ್ಮ ನೆಚ್ಚಿನ ಡಿಟಿಹೆಚ್ (DTH) ಅಥವಾ Cable Operatorಗಳ ಮೂಲಕ Sony Sports Ten 4 Kannada ವಾಹಿನಿಯನ್ನು ನೋಡಬಹುದಾಗಿದೆ.




Comments