Year End 2025: ಈ ವರ್ಷ ಗಲ್ಲಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ ಸಿನಿಮಾಗಳು.

 

photo: India TV Hindi

ಧುರಂದರ್ ನಂತರ 9 ಸ್ಥಾನಗಳನ್ನು ಪಡೆದ ಇತರ ಚಲನಚಿತ್ರಗಳು ಕಾಂತಾರ: ಎ ಲೆಜೆಂಡ್ – 1, ಛಾವಾ, ಸೈಯಾರಾ, ಕೂಲಿ, ವಾರ್ 2, ಮಹಾವತಾರ್ ನರಸಿಂಹ, ಲೋಕಾ ಅಧ್ಯಾಯ ಒಂದು: ಚಂದ್ರ, ಒಜಿ ಮತ್ತು ಹೌಸ್ ಫುಲ್ 5.

ಧುರಂದರ್

2025ರಲ್ಲಿ ರಣವೀರ್ ಸಿಂಗ್ ಅಭಿನಯದ ಧುರಂದರ್ ಚಿತ್ರ ಭಾರತೀಯ ಚಿತ್ರರಂಗದಲ್ಲಿ 1000 ಕೋಟಿ ಕ್ಲಬ್ ಸೇರಿದೆ ಮೊದಲ ಚಿತ್ರವಾಗಿದೆ. 280 ಕೋಟಿಯಲ್ಲಿ ತಯಾರಿದ ಚಿತ್ರವಾಗಿದ್ದು, 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡುತ್ತಿದೆ.

Photo: Reddit

ಕಾಂತಾರ ಚಾಪ್ಟರ್ 1

ವಿಜಯದಶಮಿ ಹಬ್ಬದ ಸಂಭ್ರಮದಲ್ಲಿ ರಿಲೀಸ್ ಆದ “ಕಾಂತರಾ ಚಾಪ್ಟರ್ 1” ಇಲ್ಲಿಯವರೆಗೂ ಅತಿ ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿಗೆ ಸೇರಿದೆಎಲ್ಲಾ ಲೆಕ್ಕಚಾರಗಳ ಪ್ರಕಾರ  ಸಿನಿಮಾ ವಿಶ್ವದದ್ಯಾಂತ ಸುಮಾರು 853.4 ಕೋಟಿ ಕಲೆಕ್ಷನ್ ಆಗಿದೆ ಅಂತ ಟಿವಿ ಭಾರತ್ ವರದಿ ಮಾಡಿದೆರಿಷಬ್ ಶೆಟ್ಟಿ ನಟಿಸಿನಿರ್ದೇಶಿಸಿದ್ದ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸನ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದರು. “ಕಾಂತಾರ” ಪ್ರೀಕ್ವೆಲ್ ಬಾಕ್ಸಾಫೀಸಿನಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸು ಸಿಕ್ಕಿದೆ.

Photo: Film Information

ಛಾವಾ

ಬಾಲಿವುಡಿಗೆ ಆರಂಭದಲ್ಲಿ ದೊಡ್ಡ ಯಶಸ್ಸು ತಂದುಕೊಟ್ಟ ಸಿನಿಮಾ ಅಂದರೆ “ಛಾವಾ”. ಪ್ರಮುಖ ಪಾತ್ರದಲ್ಲಿ ವಿಕ್ಕಿ ಕೌಶಲ್ರಶ್ಮಿಕಾ ಮಂದಣ್ಣ ನಟಿಸಿದ್ದರುಮರಾಠಿಗರ ಹೆಮ್ಮೆಯ ಧೀರನ ಬಗ್ಗೆ ಲಕ್ಷ್ಮಣ್ ಉಟೇಕರ್ ಸಿನಿಮಾ ನಿರ್ದೇಶನ ಮಾಡಿದ್ದರುಅದಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತುಭಾರತದಾದ್ಯಂತ ಬಾಕ್ಸಾಫೀಸಿನಲ್ಲಿ ಗದ್ದಲ ಎಬ್ಬಿಸಿತ್ತು ಸಿನಿಮಾ ವಿಶ್ವದಾದ್ಯಂತ 808.7 ಕೋಟಿ ರೂ ಗಳಿಕೆ ಮಾಡಿದೆಮೊದಲು ಹಿಂದಿಯಲ್ಲಿ ಮಾತ್ರ ರಿಲೀಸ್ ಆಗಿತ್ತುನಂತರ ಜನರ ಪ್ರತಿಕ್ರಿಯೆ ನೋಡಿ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಯ್ತು.

Photo: Google

ಸೈಯ್ಯಾರಾ

 ವರ್ಷದ ಬಾಲಿವುಡಿನ ಅದ್ಭುತ ಸಿನಿಮಾಗಳಲ್ಲಿ ಇದು ಒಂದುಯುವ ಪ್ರತಿಭೆಗಳನ್ನ ಹಾಕಿಕೊಂಡು ಮೋಹಿತ್ ಸೂರಿ ನಿರ್ದೇಶಿಸಿದ  ಸಿನಿಮಾ 2025ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಆದ ರೊಮ್ಯಾಂಟಿಕ್ ಸಿನಿಮಾ ಆಗಿದೆಯಶ್ ರಾಜ್ ಫಿಲಂಸ್ ಕೇವಲ 50 ಕೋಟಿ ರೂನಲ್ಲಿ ನಿರ್ಮಿಸಿದ್ದ  ಸಿನಿಮಾ ವಿಶ್ವದಾದ್ಯಂತ 575 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತುಐಎಂಡಿಬಿಯ 2025 ಜನಪ್ರಿಯ ಸಿನಿಮಾಗಳ ಪಟ್ಟಿಯಲ್ಲಿ  ಸಿನಿಮಾದ ಹೆಸರು ಕೂಡ ಸೇರಿದೆ.

Photo: YRF

ಕೂಲಿ

ರಜನೀಕಾಂತ್ ಅವರ ಕೂಲಿ ಚಿತ್ರವನ್ನು 400 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಯಿತು. ಪ್ರಚಾರದ ಹೊರತಾಗಿಯೂ, ಚಿತ್ರ ಬಿಡುಗಡೆ ನಂತರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆಗಸ್ಟ್ 14 ರಂದು ಬಿಡುಗಡೆಯಾದ ನಂತರ ಅದು ವಿಶ್ವದಾದ್ಯಂತ 518 ಕೋಟಿ ರೂ. ಗಳಿಸಿದೆ.

Photo: en.wikipedia

 ವಾರ್ 2

ಹೃತಿಕ್ ರೋಷನ್ ಮತ್ತು ಜೂನಿಯರ್ NTR ಅಭಿನಯದ ವಾರ್ 2 ಚಿತ್ರ ಆಗಸ್ಟ್ 14 ರಂದು ಬಿಡುಗಡೆಯಾಯಿತು. ಚಿತ್ರದ ಪಾತ್ರವರ್ಗದ ಮತ್ತು ಸ್ಕ್ರಿಪ್ಟ್ ಮತ್ತು ಸ್ಕ್ರೀನ್ ಪ್ಲೇ ದುರ್ಬಲವಾದ ಕಾರಣ ಟೀಕೆಗೆ ಗುರಿಯಾಯಿತು. ಆದರೂ ಈ ಚಿತ್ರ ವಿಶ್ವಾದಾದ್ಯಂತ 364.35 ಕೋಟಿ ರೂ ಗಳಿಸಿತು.

Photo: INSIDE BOX OFFICE

ಮಹಾವತಾರ್ ನರಸಿಂಹ

ಅಶ್ವಿನ್ ಕುಮಾರ್ ನಿರ್ದೇಶನದ, ಹೊಂಬಾಳೆ ಫಿಲಂಸ್ ನಿರ್ಮಾಣದ ಮಹಾವತಾರ್ ನರಸಿಂಹ ವೈಲೆಂಟ್ ಹಿಟ್ ಎಂದು ಸಾಬೀತಾಯಿತು. ಅನಿಮೇಟೆಡ್ ಚಲನಚಿತ್ರವನ್ನು 40 ಕೋಟಿಗಳ ಬಜೆಟಿನಲ್ಲಿ ನಿರ್ಮಿಸಲಾಗಿದ್ದರೂ, ವಿಶ್ವದಾದ್ಯಂತ 326.82 ಕೋಟಿ ರೂ ಸಂಗ್ರಹಿಸಿದೆ. ಇದು ಭಾರತೀಯ ಅನಿಮೇಷನ್ಗೆ ಹೆಮ್ಮೆಯ ವಿಷಯವಾಗಿದೆ.

Photo: IGN India

ಲೋಕಾ ಅಧ್ಯಾಯ ಒಂದು: ಚಂದ್ರ

ಪ್ರಾದೇಶಿಕ ಭಾಷಾ ಸಿನಿಮಾ ಕ್ಷೇತ್ರದಲ್ಲಿ ಲೋಕಾ ಅಧ್ಯಾಯ ಒಂದು: ಚಂದ್ರ ಅದ್ಭುತ ಮೂವಿಯಾಗಿದೆ. ದುಲ್ಕನ್ ಸಲ್ಮಾನ್ ನಿರ್ಮಿಸಿ ಮತ್ತು ಕಲ್ಯಾಣಿ ಪ್ರಿಯದರ್ಶನ್ ನಟಿಸಿದ ಈ ಮಲಯಾಳಂ ಮೂವಿ 30 ಕೋಟಿ ರೂ ಬಜೆಟಿನಲ್ಲಿ ನಿರ್ಮಿಸಿ ವಿಶ್ವದದ್ಯಾಂತ 303 ಕೋಟಿ ರೂ ಅಧಿಕ ಗಳಿಸಿತು.

Photo: IMDB

ಒಜಿ

ಪವನ್ ಕಲ್ಯಾಣ್ ಅವರ ಒಜಿ ಚಿತ್ರವು 2025ರ ವಿಶ್ವದ್ಯಾಂತ 155 ಕೋಟಿ ರೂ ಗಳಿಕೆಯೊಂದಿಗೆ ಅತಿ ಹೆಚ್ಚು ಆರಂಭಿಕ ದಿನ ದಾಖಲೆ ಕಂಡಿತು. ನಂತರದ ದಿನಗಳಲ್ಲಿ ಗಳಿಕೆಯಲ್ಲಿ ತೀವ್ರದ ಕುಸಿತ ಕಂಡು ಒಟ್ಟಾರೆ 293 ಕೋಟಿ ರೂ ಅಧಿಕ ಸಂಗ್ರಹದೊಂದಿಗೆ ತನ್ನ ಪ್ರದರ್ಶನವನ್ನು ಕೊನೆಗೊಳಿಸಿತು.

Photo: Times of India

ಹೌಸ್ ಫುಲ್ 5

ಅಕ್ಷಯ್ ಕುಮಾರ್, ಸಂಜಯ್ ದತ್ ಇನ್ನಿತರರು ನಟಿಸಿದ ಹೌಸ್ ಫುಲ್ 5 ಮೂವಿ ಅಸಭ್ಯ ಹಾಸ್ಯಕ್ಕಾಗಿ ಭಾರೀ ಟೀಕೆಗಳ ನಡುವೆ ಸಾಕಷ್ಟು ಉತ್ತಮ ಪ್ರದರ್ಶನವನ್ನು ನೀಡಿ ಯಶಸ್ವಿಯಾಯಿತು. ಈ ಚಿತ್ರವು ವಿಶ್ವದ್ಯಾಂತ 288 ಕೋಟಿ ರೂಗಿಂತ ಹೆಚ್ಚು ಗಳಿಸಿತು.

Photo: IMDB

Comments