ಜೂನ್ 12 ರಿಂದ ಜುಲೈ 15 ರವರೆಗೆ ಇಂಗ್ಲೆಂಡ್
ಮತ್ತು ವೇಲ್ಸ್ ಅತಿಥ್ಯದಲ್ಲಿ ಆರಂಭವಾಗುವ ಮಹಿಳಾ ಟಿ20 ವಿಶ್ವಕಪ್ ಗೆ ಬಿಸಿಸಿಐ ಆಯ್ಕೆ ಸಮಿತಿ
15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಹರ್ಮಾನ್ ಪ್ರೀತ್ ಕೌರ್ ನೇತೃತ್ವದಲ್ಲಿ ಸ್ಮೃತಿ ಮಂದಾನ ಉಪನಾಯಕಿಯಾಗಿ
ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ವರ್ಷ ನಡೆದ ಐಸಿಸಿ ಮಹಿಳಾ ಏಕದನ ವಿಶ್ವಕಪ್ ಅನ್ನು ಗೆದ್ದುಕೊಂಡಿರುವ
ಕೌರ್ ಪಡೆ ಇದೀಗ ಮೊದಲ ಬಾರಿ ಟಿ20 ವಿಶ್ವಕಪ್ ಗೆಲ್ಲುವ ಉತ್ಸಾಹದಲ್ಲಿದೆ.
ತಂಡದಲ್ಲಿ ಸ್ಮೃತಿ ಮಂದಾನ, ಶಫಾಲಿ ವರ್ಮಾ,
ಜೆಮಿಮಾ ರೋಡ್ರಿಗಸ್ ಮತ್ತು ಡಿಚಾ ಘೋಷ್ ಬ್ಯಾಟಿಂಗ್ ಬಲವಾಗಿದ್ದಾರೆ. ಬೌಲಿಂಗ್ ಜವಾಬ್ದಾರಿ ದೀಪ್ತಿ
ಶರ್ಮಾ ಮತ್ತು ರೇಣುಕಾ ಸಿಂಗ್ ಅವರ ಹೆಗಲ ಮೇಲೆ ಇದೆ. ತಂಡದಲ್ಲಿರುವ ನಾಲ್ವರು ಹೊಸ ಆಟಗಾರ್ತಿಯರಿಗೆ
ಅವಕಾಶ ಕಲ್ಪಿಸಿದ್ದಾರೆ. ಭಾರತಿ ಪುಲ್ಮಾಲಿ, ನಂದಿನಿ ಶರ್ಮಾ, ಶ್ರೀ ಚರಣಿ ಮತ್ತು ಕ್ರಾಂತಿ ಗೌಡ್
ಮೊದಲ ವಿಶ್ವಕಪ್ ಆಡುತ್ತಿದ್ದಾರೆ.
ದೀರ್ಘಕಾಲ ಗಾಯದಿಂದಾಗಿ ಕ್ರಿಕೆಟ್ ಕಣದಿಂದ
ದೂರವಿದ್ದ ಶ್ರೇಯಾಂಕಾ ಪಾಟೀಲ್ 2026ರ ಟಿ20 ವಿಶ್ವಕಪಿನಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಈವರೆಗೆ
ಒಟ್ಟು 21 ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿರುವ ಅವರು 28 ವಿಕೆಟ್ ಕಬಳಿಸಿದ್ದಾರೆ.
ಈ ಬಾರಿ ಒಟ್ಟು 33 ಪಂದ್ಯಗಳು ನಡೆಯಲಿವೆ. ಭಾರತ ತಂಡವು ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನೆದರ್ಲೆಂಡ್, ಬಾಂಗ್ಲಾದೇಶ ತಂಡದೊಂದಿಗೆ ಎ ಗುಂಪಿನಲ್ಲಿ ಕಣದಲ್ಲಿ ಇವೆ.
ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ
ಹರ್ಮಾನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ,
ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಜಾ ಘೋಷ್ (ವಿಕೆಟ್ ಕೀಪರ್), ಆರುಂಧತಿ ರೆಡ್ಡಿ, ರೇಣುಕಾ
ಠಾಕೂರ್, ಕ್ರಾಂತಿ ಗೌಡ್, ಶ್ರೀ ಚರಣಿ, ಶ್ರೇಯಾಂಕಾ ಪಾಟೀಲ್, ಭಾರತಿ ಪುಲ್ಮಾಲಿ, ಯಸ್ತಿಕಾ ಭಾಟಿಯಾ
(ವಿಕೆಟ್ ಕೀಪರ್), ನಂದಿನಿ ಶರ್ಮಾ ಹಾಗೂ ರಾಧಾ ಯಾದವ್.
2026ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ವೇಳಾಪಟ್ಟಿ.
ಜೂನ್ 14, ಪಾಕಿಸ್ತಾನ ವಿರುದ್ದ, ಬರ್ಮಿಂಗ್ಹ್ಯಾಮ್
ಜೂನ್ 17, ನೆದರ್ಲೆಂಡ್ ವಿರುದ್ದ, ಲೀಡ್ಸ್
ಜೂನ್ 21, ದಕ್ಷಿಣ ಆಫ್ರಿಕಾ ವಿರುದ್ದ, ಮ್ಯಾಂಚೆಸ್ಟರ್
ಜೂನ್ 25, ಬಾಂಗ್ಲಾದೇಶ ವಿರುದ್ದ, ಮ್ಯಾಂಚೆಸ್ಟರ್
ಜೂನ್ 28, ಆಸ್ಟ್ರೇಲಿಯಾ ವಿರುದ್ದ, ಲಾರ್ಡ್ಸ್ (ಲಂಡನ್)


%20-%202026-05-03T124822.726.jpeg)
Comments
Post a Comment