ಈ ವಾರ ಒಟಿಟಿಗೆ ಬಂದ ಸಿನಿಮಾಗಳು ಮತ್ತು ವೆಬ್ ಸಿರೀಸ್

 ಪ್ರತಿ ವಾರದಂತೆ ಈ ವಾರವು ಸಹ ಸಿನಿಮಾಗಳು ಮತ್ತು ವೆಬ್ ಸರಣಿಗಳು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಕನ್ನಡದ ಸಿನಿಮಾಗಳು ಮತ್ತು ವೆಬ್ ಸರಣಿಗಳು ಒಟಿಟಿಗೆ ಬರುವುದು ಅಪರೂಪವಾಗಿದೆ. ಆದರೆ ವಾರ ಜಿ5ನಲ್ಲಿ ಕನ್ನಡದ ವೆಬ್ ಸಿರೀಸ್ ಬಿಡುಗಡೆಯಾಗಿದೆ. ಅದರ ಪಟ್ಟಿ ಈ ಕೆಳಗೆ ಇದೆ.

ನಾಗಭೂಷಣ್, ಓಂ ಪ್ರಕಾಶ್ ರಾವ್ ಇನ್ನು ಹಲವು ಕಲಾವಿದರು ನಟಿಸಿರುವ ‘ಜೆರಾಕ್ಸ್’ ಎಂಬ ಕನ್ನಡ ವೆಬ್ ಸರಣಿ ಜಿ5ನಲ್ಲಿ ಬಿಡುಗಡೆಯಾಗಿದೆ. ಮನುಷ್ಯರನ್ನು ಜೆರಾಕ್ಸ್ ಮಾಡುವ ಭಿನ್ನ ರೀತಿಉ ಕಾನ್ಸೆಪ್ಟ್ ಈ ವೆಬ್ ಸರಣಿ ಒಳಗೊಂಡಿದೆ. ಈ ವೆಬ್ ಸರಣಿಯನ್ನ ಜಿ5ನಲ್ಲಿ ನೋಡಬಹುದು.

ಮಲಯಾಳಂ ಸ್ಟಾರ್ ನಟ ನಿವಿನ್ ಪೌಲಿ ನಟಿಸಿರುವ “ಪ್ರತಿಚಾಯ” ಇದೇ ವಾರದ JIO HOTSTARನಲ್ಲಿ ಲಭ್ಯವಿದೆ. ಇದೊಂದು ರಾಜಕೀಯ ಥ್ರಿಲ್ಲರ್ ಕತೆಯಾಗಿದ್ದು, ಸಿಎಂ ಪುತ್ರ ತನ್ನ ತಂದೆಯ ಮೇಲೆ ಬಂದ ಆರೋಪವನ್ನು ತೊಡೆದುಹಾಕುವ ಕತೆಯನ್ನು ಈ ಸಿನಿಮಾ ಹೊಂದಿದೆ.


ಜಿಎಂ ಪ್ರಕಾಶ್ ನಟನೆಯ ತೆಲುಗು ಮತ್ತು ತಮಿಳು ಭಾಷೆಯ ಕಾಮಿಡಿ ಡ್ರಾಮಾ ಸಿನಿಮಾ ‘ಹ್ಯಾಪಿ ರಾಜ್’ ಈ ಸಿನಿಮಾ ಇದೀಗ ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಬಿಡುಗಡೆ ಆಗಿದೆ.

ಅನಿಲ್ ಕಪೂರ್ ನಟನೆಯ ’24 SEASON – 02’ ವೆಬ್ ಸರಣಿಯನ್ನ JIO HOTSTARನಲ್ಲಿ ನೋಡಬಹುದು. ವ್ಯಕ್ತಿಯೊಬ್ಬ ತನ್ನ ಕುಟುಂಬವನ್ನು ಉಳಿಸಿಕೊಳ್ಳಲು ಹಾಗೂ ಭಯೋತ್ಪಾದಕ ಕೃತ್ಯವನ್ನು ತಡೆಯಲು ಸಮಯದೊಂದಿಗೆ ರೇಸಿಗೆ ಬೀಳುವ ಕತೆಯನ್ನು ಒಳಗೊಂಡಿದೆ.

ಖ್ಯಾತ ಹಾಲಿವುಡ್ ನಟ ಟಿಮಟಿ ಶಾಲೊಮೆ ನಟಿಸಿರುವ, ಆಸ್ಕರ್ ನಾಮನೇಟೆಡ್ ಸಿನಿಮಾ “ಮಾರ್ಟಿ ಸುಪ್ರೀಂ” ಈ ವಾರ ಅಮೆಜಾನ್ ಪ್ರೈಂಗೆ ಬಂದಿದೆ. ಸಿನಿಮಾ ಒಂಭತ್ತು ವಿಭಾಗಗಳಲ್ಲಿ 2026 ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿತ್ತು.


ಸಾಕಷ್ಟು ವಿವಾದಗಳ ನಡುವೆ ಇದೇ ಫೆಬ್ರವರಿಯಲ್ಲಿ ಬಿಡುಗಡೆ ಆದ ಸಿನಿಮಾ ‘ದಿ ಕೇರಳ ಸ್ಟೋರಿ 2’ ಈ ಸಿನಿಮಾ ಈ ವಾರ ಜಿ5ನಲ್ಲಿ ನೋಡಬಹುದಾಗಿದೆ. ಬಾಕ್ಸ್ ಆಫೀಸಿನಲ್ಲಿ ಸಾಧಾರಣ ಪ್ರದರ್ಶನ ಕಂಡ ಸಿನಿಮಾವಾಗಿದೆ.

Comments