ಜನವರಿ 11 ರಿಂದ ನಡೆಯುವ ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿಗೆ ಬಿಸಿಸಿಐ
ಆಯ್ಕೆ ಸಮಿತಿ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಶುಭಮನ್ ಗಿಲ್ ಸಾರಥ್ಯದಲ್ಲಿ ಹಾಗೂ ಶ್ರೇಯಸ್
ಅಯ್ಯರ್ ಉಪನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
2027ರ ಐಸಿಸಿ ಏಕದಿನ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ರೋಹಿತ್ ಶರ್ಮ, ವಿರಾಟ್
ಕೊಹ್ಲಿ, ಕೆ.ಎಲ್.ರಾಹುಲ್, ರಿಷಬ್ ಪಂತ್, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ ಇನ್ನು ಮುಂತಾದ ಆಟಗಾರರಿಗೆ
ಆಯ್ಕೆ ಮಾಡಲಾಗಿದೆ. ಆಸ್ಟ್ರೇಲಿಯಾ ಸರಣಿ ವೇಳೆ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್ ಕೂಡ ಪುನರಾಯ್ಕೆಯಾಗಿದ್ದಾರೆ.
ಆದರೆ ಇತ್ತೀಚಿಗೆ ದೇಶಿಯ ಟೂರ್ನಿಯಲ್ಲಿ ಅಬ್ಬರಿಸಿದ ವಿಕೆಟ್ ಕೀಪರ್ ಕಂ ಬ್ಯಾಟರ್ ಇಶಾನ್ ಕಿಶನ್,
ಸರ್ಫರಾಜ್ ಖಾನ್, ಮೊಹಮ್ಮದ್ ಶಮಿ ಸೇರಿದಂತೆ ಹಲವರಿಗೆ ಚಾನ್ಸ್ ಮಿಸ್ ಆಗಿದೆ.
ಏಕದಿನ ಸರಣಿಗೆ ಭಾರತ
ತಂಡ ಹೀಗಿದೆ
ಶುಭಮನ್ ಗಿಲ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್)
ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ,
ಪ್ರಸಿದ್ದ್ ಕೃಷ್ಣ, ಕುಲ್ ದೀಪ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ,
ಆರ್ಷ್ ದೀಪ್ ಸಿಂಗ್, ಯಶಸ್ವಿ ಜೈಸ್ವಾಲ್.
ಭಾರತ ಮತ್ತು ನ್ಯೂಜಿಲೆಂಡ್: ಏಕದಿನ ಸರಣಿ ವೇಳಾಪಟ್ಟಿ:
ಜನವರಿ 11: ಮೊದಲ ಏಕದಿನ ಪಂದ್ಯ, ವಡೋದರಾ
ಜನವರಿ 14: ಎರಡನೇ ಏಕದಿನ ಪಂದ್ಯ, ರಾಜ್ಕೋಟ್
ಜನವರಿ 18: ಮೂರನೇ ಏಕದಿನ ಪಂದ್ಯ, ಇಂದೋರ್
.jpg)

Comments
Post a Comment