ಕನ್ನಡ ಚಿತ್ರರಂಗ ಜಗತ್ತಿನ ಎಲ್ಲಾ ಕಡೆಗಳಲ್ಲಿ ಸದ್ದು ಮಾಡುವ ಹಂತಕ್ಕೆ ಬೆಳೆದು ಬಂದಿದೆ. ಕನ್ನಡ ಸಿನಿಮಾಗಳ ಈ ಬೆಳವಣಿಗೆ ಇಂಡಸ್ಟ್ರಿಗೆ ಹೊಸ ಕಳೆ ಬಂದಿದ್ದು ಮತ್ತು ಕನ್ನಡ ಕಲಾವಿದರಿಗೆ ಇತರೆ ಭಾಷೆಗಳಲ್ಲೂ ಕೂಡ ಡಿಮ್ಯಾಂಡ್ ಕ್ರಿಯೇಟ್ ಮಾಡುತ್ತಿದೆ. ಅದರಲ್ಲೂ ಡಿಸೆಂಬರ್ ತಿಂಗಳು ಕನ್ನಡ ಚಿತ್ರರಂಗಕ್ಕೆ ಬಲು ಮುಖ್ಯ. ಕಾರಣ ಸಾಲು ಸಾಲು ರಜೆಗಳ ಜೊತೆಗೆ ತಮ್ಮ ನೆಚ್ಚಿನ ಹೀರೋಗಳ ಚಿತ್ರಗಳು ಕೂಡ ರಿಲೀಸ್ ಆಗಿದೆ. ಹಾಗಾದರೆ ಈ ತಿಂಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಎಷ್ಟು ಹಣ ಸಂದಾಯವಾಗಿದೆ ಅನ್ನೋದೆ ಮುಖ್ಯ.
ನಟ ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ “ಡೆವಿಲ್” ಅದ್ದೂರಿಯಾಗಿ ರಿಲೀಸ್ ಆಗಿ ಸೌಂಡ್ ಮಾಡಿತ್ತು. ನಂತರ ಕಿಚ್ಚ ಸುದೀಪ್ ಅವರ “ಮಾರ್ಕ್” ಮತ್ತು ಶಿವರಾಜಕುಮಾರ್ ಅವರ “45” ಸಿನಿಮಾಗಳು ರಿಲೀಸ್ ಆಗಿವೆ.
![]() |
| Photo: The Hindu |
ಕೋಟಿ ಕೋಟಿ ರೂಪಾಯಿ ಕಲೆಕ್ಷನ್
ಡೆವಿಲ್ ನಂತರ ಸುದೀಪ್ ಅಭಿನಯದ “ಮಾರ್ಕ್” ಮತ್ತು ಶಿವರಾಜಕುಮಾರ್ ಮತ್ತು ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರು ನಟಿಸಿರುವ “45” ಸಿನಿಮಾ ಅಬ್ಬರಿಸಿದ್ದವು. ಈ ಎಲ್ಲಾ ಸಿನಿಮಾಗಳು ಇಲ್ಲಿಯವರೆಗೆ ಎಷ್ಟು ಕೋಟಿಗಳಲ್ಲಿ ಕಲೆಕ್ಷನ್ ಮಾಡಿ ಅಭಿಮಾನಿಗಳನ್ನು ರಂಜಿಸಿದೆ ಅಂತ ನಾವು ಮಾಧ್ಯಮಗಳಲ್ಲಿ ನೋಡಬಹುದು. ಇದರಿಂದ ಕನ್ನಡ ಸಿನಿರಂಗಕ್ಕೆ ಬಲ ತುಂಬಿದಂತಾಗಿದೆ.
| Photo: Cinema Express |
ಯಾವ ಸಿನಿಮಾಗೆ ಎಷ್ಟು ಕೋಟಿ ಕಲೆಕ್ಷನ್ ಮಾಡಿದೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಡೆವಿಲ್” 30 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಅಂತ ಹೇಳಲಾಗಿದೆ. ಇದರ ಬೆನ್ನಲ್ಲೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ “ಮಾರ್ಕ್” ಸಿನಿಮಾ ಕಲೆಕ್ಷನ್ ಕೂಡ 30 ಕೋಟಿ ರೂಪಾಯಿಗಳನ್ನ ದಾಟಿ ಮುಂದಕ್ಕೆ ಹೋಗುತ್ತಿದ್ದು, ವಾರಾಂತ್ಯದಲ್ಲಿ ಇನ್ನೂ ಹೆಚ್ಚಿನ ಗಳಿಕೆ ಮಾಡಬಹುದು ಎಂದು ಅಂದಾಜಿಸಲಾಗಿದೆ.
![]() |
| Photo: Online |
ಇನ್ನೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ & ರಾಜ್ ಬಿ ಶೆಟ್ಟಿ ಅವರ “45” ಸಿನಿಮಾ ಕಲೆಕ್ಷನ್ 10 ಕೋಟಿ ದಾಟ್ಟಿದ್ದು, ಅಭಿಮಾನಿಗಳಿಂದ ಒಳ್ಳೇ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಈ ಎಲ್ಲಾ ಚಿತ್ರಗಳಿಗೂ ಪೈರಸಿ ಕಾಟ ಹೆಚ್ಚಾಗಿ ಗಳಿಕೆಯಲ್ಲಿ ಸ್ವಲ್ಪ ಹಿನ್ನಡೆಯಾಗಿದೆ. ಒಟ್ಟಾರೆ ಈ ಮೂರು ಮೂವಿಗಳ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಇನ್ನೂ ನಿಖರ ಮಾಹಿತಿ ಬಂದಿಲ್ಲ, ಹೀಗಾಗಿ ಕುತೂಹಲ ಕೂಡ ಹೆಚ್ಚಾಗಿದೆ....
| Photo: Times of India |


Comments
Post a Comment