ಯಾವ ಭಾಷೆಯ ಬಿಗ್ ಬಾಸ್ ಶೋಗೆ ಹೆಚ್ಚಿನ ರೇಟಿಂಗ್ ? ಲಿಸ್ಟ್ ಪ್ರಕಟ

 

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋ ತನ್ನದೇ ಆದ ರೇಟಿಂಗ್ ಪಡೆದುಕೊಂಡಿದೆ. ಕಿಚ್ಚನ ನೋಡಲು ವಾರಾಂತ್ಯದಲ್ಲಿ ಜನರು ಆಸಕ್ತರಾಗಿದ್ದರೆ, ಬಿಗ್ ಬಾಸ್ ಶೋನಲ್ಲಿ ಮಲಯಾಳಂ ನಂ. 1 ರೇಟಿಂಗ್ ಪಡೆದರೆ ಕೊನೆಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಹಿಂದಿ ಇದೆ.
Big Boss Hosting                         Source : Google

ಬಿಗ್ ಬಾಸ್ ರಿಯಾಲಿಟಿ ಶೋ ರೇಟಿಂಗ್
ಬಿಗ್ ಬಾಸ್ ರಿಯಾಲಿಟಿ ಶೋ ಅತಿ ಹೆಚ್ಚು ಚರ್ಚೆ ಹಾಗೂ ವಿವಾದಕ್ಕೆ ಒಳಗಾಗಿರುವ ರಿಯಾಲಿಟಿ ಶೋ. ಬಿಗ್ ಬಾಸ್ ಕನ್ನಡ ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಈ ಬಾರಿ ಕನ್ನಡ ಬಿಗ್ ಬಾಸ್ 2 ದಿನ ಲಾಕ್ ಆಗಿ ಭಾರಿ ಸಂಚಲನಕ್ಕೂ ಕಾರಣವಾಗಿತ್ತು. ಈ ಎಲ್ಲಾ ಅಂಶಗಳ ನಡುವೆ ಬಿಗ್ ಬಾಸ್ ರೇಟಿಂಗ್ ಬಹಿರಂಗವಾಗಿದೆ.
Image Credit : Google

ಬಿಗ್ ಬಾಸ್ ಕನ್ನಡ ಮತ್ತು ಕಿಚ್ಚ ಸುದೀಪ್
ಎಂದಿನಂತೆ ಬಿಗ್ ಬಾಸ್ ಕನ್ನಡ ಅತಿ ಹೆಚ್ಚು ರೇಟಿಂಗ್ ಹೊಂದಿದ್ದ ಕಾರ್ಯಕ್ರಮ. ಈ ಬಾರಿ ಬಿಗ್ ಬಾಸ್ ರೇಟಿಂಗ್ ವಾರದಲ್ಲಿ ನಡೆಯುವ ಸ್ಪರ್ಧಿಗಳ ಸ್ಪರ್ಧೆಗಿಂತ ವಾರಾಂತ್ಯದ ಕಿಚ್ಚನ ಮಾತುಕತೆಗೆ ಹೆಚ್ಚಿನ ರೇಟಿಂಗ್ ಸಿಗುತ್ತದೆ. ಬಿಗ್ ಬಾಸ್ 12ರ ಆವೃತ್ತಿಯಲ್ಲಿ ಸ್ಪರ್ಧಿಗಳ ಆಟದ ರೇಟಿಂಗ್ 7.4 ಇದ್ದು, ಆದರೆ ಶನಿವಾರ ಮತ್ತು ಭಾನುವಾರ ಕಿಚ್ಚನ ಮಾತುಕತೆ ಕಾರ್ಯಕ್ರಮದ ರೇಟಿಂಗ್ 10.9 ಅಧಿಕ ರೇಟಿಂಗ್ ಬರುತ್ತಿದೆ. ಇದಕ್ಕೆ ಕಾರಣ ಕಿಚ್ಚ ಸುದೀಪ್ ಅವರ ನಿರೂಪಣೆಯನ್ನ ನೋಡಲು ಜನರು ಟಿವಿ ಮುಂದೆ ಕುಳಿತುಕೊಳ್ಳುತ್ತಿದ್ದಾರೆ.
Image Credit : Google

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮಲಯಾಳಂ ನಂ. 1
ಬಿಗ್ ಬಾಸ್ ಎಲ್ಲಾ ಭಾಷೆಯ ಕಾರ್ಯಕ್ರಮಗಳಿಗಿಂತ ಮಲಯಾಳಂ ನಂ. 1 ರೇಟಿಂಗ್ ಪಡೆದುಕೊಂಡಿದೆ. ಸೂಪರ್ ಸ್ಟಾರ್ ಮೋಹನ್ ಲಾಲ್ ನಡೆಸಿಕೊಡುವ ಮಲಯಾಳಂ ಬಿಗ್ ಬಾಸ್ 12.1 ರೇಟಿಂಗ್ ಪಡೆದಿದೆ. ಇನ್ನು ತೆಲುಗು 2ನೇ ಸ್ಥಾನದಲ್ಲಿದ್ದರೆ ಕನ್ನಡ ಮೂರನೇ ಸ್ಥಾನದಲ್ಲಿದೆ. ಕೊನೆಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್ ಬಾಸ್ ಇದೆ.
Image Credit : Google

ಬಿಗ್ ಬಾಸ್ ಶೋ ರೇಟಿಂಗ್

ಮಲಯಾಳಂ : 12.1 ರೇಟಿಂಗ್

ತೆಲುಗು : 11.1 ರೇಟಿಂಗ್ 

ಕನ್ನಡ : 7.4 ರೇಟಿಂಗ್ (ವಾರಾಂತ್ಯ 10.9)

ತಮಿಳು : 5.6 ರೇಟಿಂಗ್ 

ಹಿಂದಿ : 1.3 ರೇಟಿಂಗ್

Image Credit : Bigg Boss Malayalam/Instragram

ರೇಟಿಂಗ್ ಹೆಚ್ಚಿಸಲು ಕಸರತ್ತು
ಬಿಗ್ ಬಾಸ್ ರೇಟಿಂಗ್ ಹೆಚ್ಚಿಸಲು ಆಯೋಜಕರು ಹಲವು ರೀತಿಯ ಕಸರತ್ತುಗಳನ್ನ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್, ನಾಗರ್ಜುನ, ವಿಜಯ್ ಸೇತುಪತಿ, ಮೋಹನ್ ಲಾಲ್, ಸಲ್ಮಾನ್ ಖಾನ್ ಸೇರಿದಂತೆ ಹಲವು ಸೂಪರ್ ಸ್ಟಾರ್ ಗಳ ಜನಪ್ರಿಯತೆಯಲ್ಲಿ ಬಿಗ್ ಬಾಸ್ ಒಂದಿಷ್ಟು ಟಿ.ಆರ್.ಪಿ ಹೆಚ್ಚಿಸಿಕೊಂಡಿದೆ. ಆದರೆ ಸ್ಪರ್ಧಿಗಳ ಸ್ಪರ್ಧೆಯನ್ನು ನೋಡುವ ಬದಲು ವಾರಾಂತ್ಯದಲ್ಲಿ ಬರುವ ಸೂಪರ್ ಸ್ಟಾರ್ ಗಳ ನಿರೂಪಣಾ ಶೈಲಿಗೆ ನೋಡುಗರು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂಬ ಅಂಶಗಳು ಬಹಿರಂಗಗೊಂಡಿದೆ.


Comments